
24th August 2025
ಹುಬ್ಬಳ್ಳಿ : ಖ್ಯಾತ ಹಿಂದುಸ್ತಾನಿ ಸಂಗೀತದ ಮತ್ತು ಕೀರಾಣಾ ಘರಾಣದ ಅಪ್ರತಿಮ ಗಾಯಕರು, ಪಂಡಿತ್ ಶ್ರೀಪತಿ ಪಾಡಿಗಾರ್ ಇವರಲ್ಲಿ ಗುರುಕುಲ ಪದ್ಧತಿಯಲ್ಲಿ ಅನೇಕ ವರ್ಷಗಳ ಕಾಲ ಹೆಚ್ಚು ಸಂಗೀತ ಅಭ್ಯಾಸ ಮಾಡಿರುವ ಪ್ರೀತಿಯ ಶಿಷ್ಯರಾದ ಶ್ರೀ ಸಂಜೀವ ಜೋಶಿ ಅವರು ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದ 250ನೇ ನೇರ ಪ್ರಸಾರದ ಸಂಗೀತದ ರಸದೌತಣವನ್ನು ನೀಡಲು ಇಂದು 24/08/2025 ರವಿವಾರ ಸಾಯಂಕಾಲ 6 ಗಂಟೆಗೆ ನಿಮ್ಮ ಮುಂದೆ ಲೈವ್ ಕಾರ್ಯಕ್ರಮದಲ್ಲಿ ಬರಲಿದ್ದಾರೆ. ಅವರ ಕಾರ್ಯಕ್ರಮ ಯಶಶ್ವಿಯಾಗಿ ಮೂಡಿ ಬರಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತೇನೆ ಎಂದು ಡಾ. ಆರ್.ಪಿ. ಕುಲಕರ್ಣಿ ಅವರು ತಿಳಿಸಿದ್ದಾರೆ.
ಇಂದು ಸಂಜೆ 6 ಘಂಟೆಗೆ ನಡೆಯುವ 250ನೇ ನೇರ ಪ್ರಸಾರದ ಕಾರ್ಯಕ್ರಮವು ಹುಬ್ಬಳ್ಳಿಯಲ್ಲಿ ಇರುವ ತಮ್ಮ ಸ್ವಗ್ರಹದಿಂದಲೇ ಫೇಸ್ಬುಕ್ ದಲ್ಲಿ ಪ್ರಸಾರವಾಗಲಿದೆ ಹಾಗೂ ಗಾಯಕರಾದ ಸಂಜೀವ ಜೋಶಿ ಅವರ ಜೊತೆ ಸವಾಂದಿ ಕೀರಣ್, ತಬಲಾ ಪ್ರಶಾಂತ್, ತಾನಪೂರಾ ಲಕ್ಷ್ಮೀ ಪರವತಿಕರ್,
ತಾಳವನ್ನು ಅಶ್ವಥ್ ಆಚಾರ್ಯ ಮತ್ತು M.H ಜೋಶಿ
ಮಾಡಲಿದ್ದಾರೆ. ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದ ಎಲ್ಲ ಸದಸ್ಯರು ಈ ಕಾರ್ಯಕ್ರಮವನ್ನು ವೀಕ್ಷಿಸಬೇಕೆಂದು ಡಾ. ಆರ್.ಪಿ. ಕುಲಕರ್ಣಿ ಅವರು ತಿಳಿಸಿದ್ದಾರೆ.
ಭೀಮಸೇನರಾವ್ ಕುಲಕರ್ಣಿ ಬನ್ನೆಟ್ಟಿ, ಜಿಎಂ ನ್ಯೂಜ್ ಕುಷ್ಟಗಿ.
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆ
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ ಅಂಗವಾಗಿ ಮೊದಲನೇ ದಿನ ಪುರಾಣದ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶ್ರೀಗಳವರಿಂದ ಚಾಲನೆ.
ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವ.